ಇಶಾ ಕೊಪ್ಪಿಕರ್.. ಕನ್ನಡದಲ್ಲಿ ಕೆಲವೇ ಸಿನಿಮಾ ಮಾಡಿದ್ದರೂ ಕೂಡ ಅವರ ಮುಖವನ್ನು ಇಂದಿಗೂ ಕನ್ನಡ ಸಿನಿ ಪ್ರೇಕ್ಷಕರು ಮರೆತಿಲ್ಲ. 'ಸೂರ್ಯವಂಶ' ಸಿನಿಮಾದಲ್ಲಿ ಸತ್ಯಮೂರ್ತಿ ಸೊಸೆಯಾಗಿದ್ದ ಈ ಚೆಲುವೆ ಈಗ ಮತ್ತೆ ಕನ್ನಡಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರಂತೆ.ಮಲೆಯಾಳಂ ಭಾಷೆಯ 'ಒಪ್ಪಂ' ಸಿನಿಮಾ ಕನ್ನಡದಲ್ಲಿ ರಿಮೇಕ್ ಆಗುತ್ತಿದ್ದು, ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಕುರುಡನಾಗಿ ಅಭಿನಯಿಸುತ್ತಿದ್ದಾರೆ. ಇದೀಗ ಈ ಚಿತ್ರಕ್ಕೆ ನಟಿ ಇಶಾ ಕೊಪ್ಪಿಕರ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಪೊಲೀಸ್ ಪಾತ್ರದಲ್ಲಿ ಇಶಾ ಕಾಣಿಸಿಕೊಳ್ಳಲಿದ್ದಾರಂತೆ.2000ರಲ್ಲಿ 'ಓ ನನ್ನ ನಲ್ಲೆ' ಸಿನಿಮಾ ಮಾಡಿದ್ದ ಇಶಾ ಕೊಪ್ಪಿಕರ್ ಆ ಬಳಿಕ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬಿಜಿ ಆಗಿದ್ದರು. ಆದರೆ ಇದೀಗ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದು, ಇದೇ ಮೊದಲ ಬಾರಿಗೆ ಶಿವಣ್ಣನ ಜೊತೆ ಇಶಾ ನಟಿಸುತ್ತಿದ್ದಾರೆ. ಇನ್ನು ಈ ಚಿತ್ರ ನವೆಂಬರ್ 23ಕ್ಕೆ ಸೆಟ್ಟೇರಲಿದ್ದು, ಜಿವಿಆರ್ ವಾಸು ನಿರ್ದೇಶನ ಮಾಡಲಿದ್ದಾರೆ.
esaha koppikar have done few movies in kannada and yet the face is very familiar to sandalwood , malayalam's "oppam" movie is going to be remake in kannada, and esha koppikar will be acting in this movie and shivaraj kumar is also acting in this movie ,